HomeMahābhārata › Yudhiṣṭhira

Yudhiṣṭhira

ಯುಧಿಷ್ಠಿರ
The Dharma King · Dharmaraja · Ajatashatru

Eldest of the five Pandavas, son of Dharma (Yama). Renowned for his unshakeable commitment to truth — yet his fatal weakness for dice gambling set the entire catastrophe in motion.

Eldest PandavaSon of Yama (Dharma)EmperorNever told a full lieYaksha Prashna
Allegiance
Pāṇḍava
Kingdom
Indraprastha / Hastinapur
Modern location
Delhi / Near Meerut, UP
Parents
Kunti & Dharma / Yama (god of death)
Spouse
Draupadi (shared), Devika

The story

Character

Yudhishthira, known as Dharmaraja ('King of Dharma'), never uttered a deliberate lie in his life — except once, when he said 'Ashwatthama is dead' (referring to an elephant, not Drona's son) to break Drona's fighting spirit. Even this half-truth caused his chariot (which had floated above the ground due to his righteousness) to touch the earth.

The Dice Game — His Tragic Flaw

Shakuni engineered an invitation to dice. Yudhishthira knew it was a trap — but kshatriya code forbade refusing. He lost his army, his kingdom, his brothers, himself, and finally Draupadi. Each loss was a failure of both weakness and code-bound honor. This single event set five million soldiers to their deaths.

After the War

Crowned Emperor of Hastinapur, he performed the Ashwamedha sacrifice (horse sacrifice, spanning a year) to cleanse war-guilt. He ruled wisely for decades. On the final journey to the Himalayas, he was the only human to reach Svarga (heaven) in his mortal body — accompanied by a dog who was Dharma (Yama) in disguise, testing his loyalty.

The same name in the sky: Yama presides over the nakshatra Bharani (ಭರಣಿ) — one of the 27 segments the Moon travels through. The epic and the almanac are naming the same figures.

ಯುಧಿಷ್ಠಿರ — ಕಥೆ

ಪಂಚಪಾಂಡವರಲ್ಲಿ ಹಿರಿಯನು. ಧರ್ಮದೇವತೆಯ ಮಗ. ಸತ್ಯ ಮತ್ತು ಧರ್ಮದ ಬಗ್ಗೆ ಅಚಲ ನಿಷ್ಠೆ ಇದ್ದವನು — ಆದರೆ ಜೂಜಿನ ವ್ಯಸನವೇ ಇಡೀ ಮಹಾವಿನಾಶಕ್ಕೆ ಬೀಜ ಬಿತ್ತಿತು.

ಹಿರಿಯ ಪಾಂಡವಯಮಪುತ್ರಚಕ್ರವರ್ತಿಸತ್ಯಸಂಧಯಕ್ಷಪ್ರಶ್ನೆ
ಪಕ್ಷ
ಪಾಂಡವ ಪಕ್ಷ
ರಾಜ್ಯ
ಇಂದ್ರಪ್ರಸ್ಥ / ಹಸ್ತಿನಾಪುರ
ಇಂದಿನ ಸ್ಥಳ
ದೆಹಲಿ / ಮೀರತ್ ಬಳಿ, ಉತ್ತರ ಪ್ರದೇಶ
ತಂದೆ–ತಾಯಿ
ಕುಂತಿ ಮತ್ತು ಯಮಧರ್ಮ
ಸಂಗಾತಿ
ದ್ರೌಪದಿ, ದೇವಿಕಾ

ಸ್ವಭಾವ

ಧರ್ಮರಾಜನೆಂದೇ ಹೆಸರಾದವನು ಜೀವಮಾನದಲ್ಲಿ ಒಂದೇ ಒಂದು ಬಾರಿ ಅರ್ಧಸತ್ಯ ನುಡಿದನು — 'ಅಶ್ವತ್ಥಾಮ ಹತಃ' ಎಂದು. ಆ ಒಂದು ಮಾತಿಗೇ, ಸತ್ಯದ ಬಲದಿಂದ ನೆಲದಿಂದ ಮೇಲೆ ತೇಲುತ್ತಿದ್ದ ಅವನ ರಥ ಭೂಮಿಯನ್ನು ತಾಕಿತು.

ದ್ಯೂತ — ಅವನ ದೌರ್ಬಲ್ಯ

ಶಕುನಿಯ ಆಹ್ವಾನ ಬಲೆಯೆಂದು ತಿಳಿದಿದ್ದರೂ ಕ್ಷತ್ರಿಯಧರ್ಮ ನಿರಾಕರಿಸಲು ಬಿಡಲಿಲ್ಲ. ಭಂಡಾರ, ಸೈನ್ಯ, ರಾಜ್ಯ, ತಮ್ಮಂದಿರು, ತಾನೇ — ಕೊನೆಗೆ ದ್ರೌಪದಿಯನ್ನೂ ಸೋತನು. ಈ ಒಂದೇ ಘಟನೆ ನಲವತ್ತು ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿತು.

ಯುದ್ಧಾನಂತರ

ಹಸ್ತಿನಾಪುರದ ಚಕ್ರವರ್ತಿಯಾಗಿ ಪಟ್ಟಾಭಿಷಿಕ್ತನಾದನು. ಯುದ್ಧದ ಪಾಪ ತೊಳೆಯಲು ಅಶ್ವಮೇಧ ಯಾಗ ಮಾಡಿದನು. ಮಹಾಪ್ರಸ್ಥಾನದಲ್ಲಿ ಸ್ವರ್ಗವನ್ನು ಸಶರೀರವಾಗಿ ತಲುಪಿದ ಏಕೈಕ ಮನುಷ್ಯ — ಜೊತೆಗಿದ್ದ ನಾಯಿ ಸ್ವತಃ ಧರ್ಮದೇವತೆಯೇ ಆಗಿತ್ತು.

← Arjuna Bhīma → All 24 characters Sacred verses The ancient sky
Part of Living Vedic Cosmos — a free, bilingual guide to the Hindu sky and its stories. The Mahābhārata is presented as it is told; where this site computes anything astronomical it says so and shows the arithmetic.